ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ PDF Summary
Dear readers, today we are going to provide ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ PDF for all of you. To help the students in their reading and to improve their knowledge of the students we have given the Proverbs in Kannada Extension in Pdf format below which you can easily get through this article.
It is a very helpful collection of the most popular proverbs in the Kannada translation for all of you. Through it, you can know more information about the simple and insightful traditional statement that expresses a perceived truth based on common knowledge or experience.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ PDF
೧. ತಾಳಿದವನು ಬಾಳಿಯಾನು / ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೆ?
ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.
ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ಅತಿಯಾಗಿ ಕೋಪಮಾಡಿಕೊಳ್ಳದೆ ಸಮಾಧಾನದಿಂದ ಇರಬೇಕು. ಕೋಪ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ.
ಕೋಪಂ ಅನರ್ಥ ಸಾಧನಂ ಎಂಬ ಮಾತಿನಂತೆ ಕೋಪವು ಕೆಡುಕನ್ನು ಉಂಟುಮಾಡುತ್ತದೆ. ಕ್ಷಣಕಾಲ ಕೋಪದ ಕೈಗೆ ಬುದ್ದಿ ಕೊಟ್ಟರೆ ಅದು ನಮ್ಮನ್ನು ಮಾತ್ರವಲ್ಲದೆ ಅದಕ್ಕೆ ಗುರಿಯಾದವರನ್ನೂ ಅಪಾಯಕ್ಕೆ ನೂಕುತ್ತದೆ.
‘ಒಬ್ಬ ವ್ಯಕ್ತಿಯನ್ನು ನಾಶ ಪಡಸಬೇಕೆಂದರೆ ಆತನು ಕೋಪಗೊಳ್ಳಿವಂತೆ ಮಾಡಬೇಕು’ ಎಂಬ ಮಾತಿದೆ.
ಕುಂಬಾರನು ಹಲವು ದಿನಗಳು ಶ್ರಮ ಪಟ್ಟು ತಯಾರಿಸಿದ ಮಡಕೆಯನ್ನು ಒಂದು ದೊಣ್ಣೆಯಿಂದ ನಾಶ ಮಾಡಿದಂತ, ಕ್ಷಣಿಕ ಕೋಪವು ಅನಾಹುತವನ್ನು ಉಂಟುಮಾಡುತ್ತದೆ.
ಆದರೆ ಅದನ್ನು ಸರಿಪಡಿಸಲಾಗುತ್ತದೆಯೇ? ಕೋಪದಲ್ಲಿ ಕುಯ್ದುಕೊಂಡ ಮೂಗು ಶಾಂತವಾದ ನಂತರ ಚಿಂತಿಸಿದರೆ ಮತ್ತೆ ಸರರಿಂiಗುತ್ತದೆಯೇ? ಆದ್ದರಿಂದ ‘ತಾಳ್ಮೆಯಿಂದ ಆಲೋಚಿಸಿ, ಕೋಪವನ್ನು ಹಿಂದಿಕ್ಕಿ ಮುನ್ನಡೆದವರೇ ಜೀವನದಲ್ಲಿ ವಿಜಯಶಾಲಿಗಳಾಗಲು ಸಾಧ್ಯ.’ ಎಂಬುದು ಈ ಗಾದೆಯ ಆಶಯವಾಗಿದೆ.
೨. ಹಾಸಿಗೆ ಇದ್ದಷ್ಟು ಕಾಲು ಚಾಚು / ಅತಿ ಆಸೆ ಗತಿ ಕೆಡಿಸಿತು
ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.
ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು, ನಮ್ಮ ಆಸೆಗಳಿಗೆ ಇತಿ-ಮಿತಿಯಿರಬೇಕು ಎಂಬುದನ್ನು ತಿಳಿಸುತ್ತದೆ.
”ಆಸೆಯೇ ದುಃಖಕ್ಕೆ ಕಾರಣ’ ಎಂದು ಬುದ್ಧ ಹೇಳಿದ್ದಾನೆ. ಜೀವನದಲ್ಲಿ ಆನೆಯೇ ಇರಬಾರದೆಂದಲ್ಲ ಆದರೆ ಅದು ಅತಿಯಾಗದೆ ಮಿತವಾಗಿರಬೇಕು, ಅರಮನೆಯ ಸುಖಕ್ಕಿಂತ ನಮ್ಮಲ್ಲಿ ಲಭ್ಯವಿರುವಷ್ಟರಲ್ಲಿ ಬದುಕುವುದರಲ್ಲಿ ನೆಮ್ಮದಿ. ಇದೆ.
ಆಸೆಗಳು ಅತಿಯಾಗಿ ಆದಾಯ ಕಡಿಮೆ ಇದ್ದಾಗ ಸಾಲ ಮಾಡಬೇಕಾಗುತ್ತದೆ. ಅದ್ದರಿಂದ ಹಾಸಿಗೆ ಇದ್ದಷ್ಟು ಕಾಲುಚಾಚಬೇಕು, ಉಚಿತವಾಗಿ ಸಿಗುತ್ತದೆಂದು ಅಗತ್ಯಕ್ಕಿಂತ ಹೆಚ್ಚು ಸಂಗ್ರಹಣೆ ಮಾಡಲು ಪ್ರಯತ್ನಿಸಬಾರದು.
ಹಾಗ ಮಾಡಿದರೆ ‘ಪ್ರತಿದಿನ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕುಯ್ದು ಹಾಕಿದ ಮೂರ್ಖನ ಕಥೆಯಂತೆ” ಅತಿಯಾಸೆಯಿಂದಾಗಿ ಇದ್ದದ್ದನ್ನೂ ಕಳೆದುಕೊಳ್ಳಬೇಕಾಗುತ್ತದೆ.
Friquently Asked Questions –
ಗಾದೆ ಎಂದರೇನು?
ಜನಜನಿತರ ಅನುಭವಗಳನ್ನು ಆಡು ಭಾಷೆಯ ಮುಖಾಂತರ ವ್ಯಕ್ತ ಪಡಿಸುವುದನ್ನೇ ಗಾದೆ ಎನ್ನುವರು.
ಹಾಸಿಗೆ ಇದ್ದಷ್ಟು ಕಾಲು ಚಾಚು ಇದರ ಅರ್ಥ ಏನು?
ನಮ್ಮ ಆಸೆಗಳಿಗೆ ಇತಿ-ಮಿತಿಯಿರಬೇಕು ಎಂಬುದನ್ನು ತಿಳಿಸುತ್ತದೆ.
ತಾಳಿದವನು ಬಾಳಿಯಾನು ಎಂದರೇನು?
ಅತಿಯಾಗಿ ಕೋಪಮಾಡಿಕೊಳ್ಳದೆ ಸಮಾಧಾನದಿಂದ ಇರಬೇಕು. ಕೋಪ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ.
You can download ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ PDF by going through the following downlaod button.