ದ ರಾ ಬೇಂದ್ರೆ ಕವನಗಳು | Da Ra Bendre Poems Kannada - Description
Dear friends, here we are going to upload ದ ರಾ ಬೇಂದ್ರೆ ಕವನಗಳು PDF / The Ra Bendre Poems PDF in Kannada language to help our daily users. DR Bendre is a famous personality of Mumbai. He is a great poet of the 20th century in Kannada literature. Bendre was also awarded Jnanapitha India’s highest literary award in 1973 for his best poetry collection.
ಅಂಬಿಕಾತನಯ ದತ್ತರ ಪ್ರಮುಖ ಕೃತಿಗಳೆಂದರೆ ಕೃಷ್ಣಕುಮಾರಿ, ಗರಿ, ನಾಕುತಂತಿ, ಸಖಿಗೀತ, ನಾದಲೀಲೆ, ಉಯ್ಯಾಲೆ, ಅರಳುಮರಳು,ನಾಕುತಂತಿ, ಬಾ ಹತ್ತರ, ಸೂರ್ಯಪಾನ, ಮೂರ್ತಿಮತ್ತು ಕಾಮಕಸ್ತೂರಿ, ಹೃದಯ ಸಮುದ್ರ, ಮುಕ್ತ ಕಂಠ, ಸಂಚಯ, ಉತ್ತರಾಯಣ ಮುಂತಾದ ಕವನ ಸಂಗ್ರಹಗಳು.ಬಾಲಬೋಧೆ, ಪರಾಕಿ, ಕಾವ್ಯ ವೈಖರಿ ಮುಂತಾದ 20ಕ್ಕೂ ಅಧಿಕ ಗದ್ಯ ಬರಹ ಸಂಗ್ರಹಗಳು. ಸಾಹಿತ್ಯವಿಮರ್ಶೆ, ಸಾಹಿತ್ಯ ಸಂಶೋಧನೆ, ವಿಚಾರ ಮಂಜರಿ, ಮುಂತಾದ ಹಲವು ಸಾಹಿತ್ಯ ಗ್ರಂಥಗಳನ್ನು ರಚಿಸಿದ್ದಾರೆ.
ದ ರಾ ಬೇಂದ್ರೆ ಕವನಗಳು PDF | The Ra Bendre Poems PDF in Kannada
ದನಕರದ ಕಾಲಿನ ಧೂಳಿ
ಸಂಜೆಯ ಹೂಳಿ
ಮುಗಿಲ ಮುಟ್ಯದ
ಮುಗಿಲ ಮುಟ್ಯದ
ಗೋಧೂಳಿ ಲಗ್ನಕ್ಕೆ ಇತ್ತ
ಕೈಯ ಹಿಡಿದಿತ್ತ
ಕೈಯ ಹಿಡಿದಿತ್ತ
ಚಂದ್ರಿಕೀ ಚಂದ್ರಮರ ಜೋಡ
ಬೆಳುದಿಂಗಳ ನೋಡ
ಗೋಧೂಳಿ ಲಗ್ನ ಮದುವೆಗೆ ಅತ್ಯಂತ ಪ್ರಶಸ್ತವಾದುದು. ‘ಇತ್ತ’ ಪದಕ್ಕೆ ‘ಇರು’ ಎಂಬಂತೆ ‘ಈ ಕಡೆ’ ಎಂಬ ಅರ್ಥವೂ ಇದೆ. ‘ಇತ್ತ’ ಎಂಬ ಪದದ ಮೂಲಕ ಗೋಧೂಲಿ ಲಗ್ನದ ಲೋಕ ಮನಸ್ಥಿತಿಯೂ ಸೂಚಿಸಲ್ಪಡುತ್ತಿದೆ. ಕೈ ಹಿಡಿಯುವುದು ‘ಪಾಣಿಗ್ರಹಣ’ ಎಂಬುದು ಮದುವೆಗೆ ಇನ್ನೊಂದು ಹೆಸರು. ಮದುವೆ ಎಂದರೆ ಒಂದಾಗುವುದು. ಚಂದ್ರಿಕೀ ಚಂದ್ರಮರು ಅಲ್ಲಿದ್ದಾರೆ. ಚಂದ್ರಿಕೆ ಎಂಬುದು ಚಂದ್ರನ ಹದಿನಾರು ಕಲೆಗಳಲ್ಲಿ ಒಂದು. ಉತ್ತಮವಾದೊಂದು ಕವನ ಯಾವತ್ತೂ ವಾಚ್ಯಾರ್ಥ ಮತ್ತು ಧ್ವನ್ಯಾರ್ಥ ಎರಡನ್ನೂ ಸಮಗ್ರವಾಗಿ ಒಳಗೊಂಡಿರುತ್ತದೆ. ‘ಹೂಳಿ’ ಪದ ತನ್ನ ಶ್ಲೇಷಾರ್ಥದಲ್ಲಿ ‘ಹುಗಿ’ ಮತ್ತು ‘ರಂಗು’, ‘ಬಣ್ಣ’ ಎಂಬ ಅರ್ಥಗಳನ್ನು ನೀಡುವುದರಿಂದ ಹಗಲಿನಿಂದ ಸಂಪೂರ್ಣ ಬಿಡುಗಡೆಗೆ ಮಾತ್ರವಲ್ಲ ಲೋಕ ರೂಪಾಂತರಕ್ಕೂ ಕಾರಣವಾಗುತ್ತದೆ. ಹಗಲಿನ ಕಡು ಸತ್ಯಕ್ಕಿಂತ ಭಿನ್ನವಾದ ಬೆಳುದಿಂಗಳು ಒಂದು ಮಾಯದ ಲೋಕ.
ಈ ರೂಪಾಂತರ ಕ್ರಿಯೆ ನೋಡುವ ವ್ಯಕ್ತಿ, ಕಾಣುವ ನೋಟ ಎಲ್ಲದರಲ್ಲೂ ಬದಲಾವಣೆ ಮಾಡುತ್ತದೆ. ಅಲ್ಲಿ ಕಲಿ ಕಪ್ಪು ಎಲ್ಲೂ ಇಲ್ಲ. ಎಲ್ಲವೂ ಬಿಳುಪು. ಸೂರ್ಯ ಮರೆಯಾದ ರಾತ್ರಿಯಲ್ಲಿ ಕಪ್ಪು ಸಹಜ ಪ್ರವೇಶ ಪಡೆಯಬೇಕಾಗಿತ್ತು. ಆದರೆ ಚಂದ್ರಮನೆ ಸ್ವಾಮಿಯಾಗಿರುವ ಹಾಲುಗಡಲಿನ ಸೀಮಿಯಲ್ಲಿ ಕಪ್ಪಿಗೆ ಪ್ರವೇಶವಿಲ್ಲ. ಯಾಕೆಂದರೆ ಅದು ಬೆಳುದಿಂಗಳು ನೋಡಾಧಿ. ಗೋಧೂಳಿ ಲಗ್ನಕ್ಕೆ ಆ ಬೆಳುದಿಂಗಳಿನದ್ದೇ ಚಪ್ಪರವೂ (ಹಂದರ) ನಿರ್ಮಾಣವಾಗಿದೆ.
ಕಲಿ ಕಪ್ಪು ಎಲ್ಲಿನೂ ಇಲ್ಲ
ಒಂದೆ ಸವನೆಲ್ಲ
ಎಲ್ಲನೂ ನುಣುಪ
ಎಲ್ಲನೂ ನುಣುಪು
ಇದು ಹಾಲುಗಡಲಿನ ಸೀಮಿ
ಚಂದ್ರಮನೆ ಸ್ವಾಮಿ
ಏನೆಂಥ ಹಂದರದ ಈಡ
ಬೆಳುದಿಂಗಳ ನೋಡ
ಹಲವು ನಕ್ಷತ್ರ ರಾಣಿಯರು ಚಂದ್ರನಿಗೆ. ಅವರಲ್ಲಿ ರೋಹಿಣಿಯು ಗೆಳತಿ ಅವನವಳು. ಅವಳು ಆ ಮೆರವಣಿಗೆಯಲ್ಲಿ ಮುಂದೆ ನಲಿಯುತ್ತಾ ಇದ್ದಾಳೆ.
ರೋಹಿಣಿಯು ಎದೆಯ ಕೆಂಪೆಳ್ಳು
ಗೆಳತಿ ಅವನವಳು
ನಲೀತಾಳ ಮುಂದ
ನಲೀತಾಳ ಮುಂದ
ಹಾಕ್ಯಾರ ಚಿಕ್ಕಿ ಗೆಳತ್ಯಾರು
ಕೃತ್ತಿಕೀ ಹಾರ
ಕೃತ್ತಿಕೀ ಹಾರ
ಕಳಿಲಾಕ ಇದ್ದ ಬಿದ್ದ ಕೇಡ
ಬೆಳುದಿಂಗಳ ನೋಡ
ಅಶುಭವನ್ನು ಕಳೆಯಲು ಕೃತ್ತಿಕೆ ನಕ್ಷತ್ರದ ಹಾರ ಹಾಕಿದ್ದಾರೆ. ‘ಹಾಕ್ಯಾರ ಚಿಕ್ಕಿ ಗೆಳತ್ಯಾರು’ ಎಂಬುದು ಕೂಡಾ ಸಂಪೂರ್ಣ ಅರ್ಥ ಸಮುಚ್ಚಯವುಳ್ಳ ಪೂರ್ಣ ವಾಕ್ಯವೂ ಹೌದು. ಉತ್ತರ ಕರ್ನಾಟಕದ ವಿಶೇಷ ಬಳಕೆ ‘ಎದೆಯ ಕೆಂಪೆಳ್ಳು’ ಎನ್ನುವುದನ್ನು ಗ್ರಹಿಸಬೇಕು.
ಎಳ್ಳು ಬಿಳಿ ಹಾಗೂ ಕಪ್ಪು ಬಣ್ಣಗಳಲ್ಲಿ ಇರುತ್ತವೆ. ಕೆಂಪೆಳ್ಳು ವಾಸ್ತವದಲ್ಲಿ ಇರುವುದಿಲ್ಲ. ಆದರೆ ಚರ್ಮದಲ್ಲಿ ಎಳ್ಳಿನ ಗಾತ್ರದಲ್ಲಿ ಉಬ್ಬಿ ಇರುವ ಕೆಂಪು ಮಚ್ಚೆಗೆ ಕೆಂಪೆಳ್ಳು ಎನ್ನುತ್ತಾರೆ. ಅದಕ್ಕೆ ‘ನರೋಲಿ’ ಎಂಬ ಹೆಸರಿದೆಯಂತೆ. ಅದನ್ನು ಗೆಣತಿ/ಗೆಣೆಯ ಎಂದೂ ಕರೆಯುವುದುಂಟು. (ಈ ಬಗ್ಗೆ ವಿವರಗಳನ್ನು ಗೆಳೆಯರಾದ ಗುರುಪಾದ ಮರಿಗುದ್ದಿ ಹಾಗೂ ಶಾಮಸುಂದರ ಬಿದಿರಕುಂದಿ ಅವರಿಂದ ಪಡೆದುಕೊಂಡೆ). ರೋಹಿಣಿ ಚಂದ್ರನ ಎದೆಯ ಕೆಂಪೆಳ್ಳು. ಇಲ್ಲಿ ಬೇಂದ್ರೆ ಕಾವ್ಯವನ್ನು ಅಧ್ಯಯನ ಮಾಡುವವರು ಪದ ಪ್ರಯೋಗಗಳ ಸೂಕ್ಷ್ಮವನ್ನು ಗಮನಿಸಬೇಕು. ‘ರೋಹಿಣಿ’ ಇಲ್ಲಿ ‘ಗೆಳತಿ’, ಚಂದ್ರನ ಪತ್ನಿ. ಬೇಂದ್ರೆಯವರ ‘ಹುಬ್ಬಳ್ಳಿಯಾಂವಾ’ ಕವನದಲ್ಲಿ ‘ಎದಿ ಮ್ಯಾಗಿನ ಗೆಣತಿನ ಮಾಡಿ ಇಟ್ಟುಕೊಂಡಾಂವಾ’ ಎಂಬ ವಾಕ್ಯವಿದೆ. ಇಲ್ಲಿಯೂ ‘ಎದಿ ಮ್ಯಾಗಿನ ಗೆಣತಿ’ ಎಂಬುದು ಕೆಂಪೆಳ್ಳಿನಂತಹ ಮಚ್ಚೆಯೇ. ಅದು ಎದೆಯಲ್ಲಿ ಇದ್ದಾಗ ಅವಳ ವಿರಹ ಇಲ್ಲ ಎಂಬ ಕೃತಕ ಭಾವ. ಆದರೆ ಪದ ‘ಗೆಣತಿ’ (ಗೆಳತಿ ಅಲ್ಲ). ಯಾಕೆಂದರೆ ಅವಳು ಮದುವೆಯಾದ ಪತ್ನಿ ಅಲ್ಲ. ಇಂತಹ ಸೂಕ್ಷ್ಮ ಪದ ವ್ಯತ್ಯಾಸಗಳೂ ಕವನದೊಳಗೆ ಹಲವು ಅರ್ಥಛಾಯೆಗಳಿಗೆ ಕಾರಣವಾಗುತ್ತವೆ.
ಮುಂದಿನ ಚರಣ ರೂಪಾಂತರಕ್ಕೆ ಒಂದು ನಾಂದಿ ಹಾಕುತ್ತಿದೆ. ಆ ಹಂದರದಲ್ಲಿ ಸೇರಿದವರೆಲ್ಲಾ ಮಂತ್ರಿಸಿದ ಬೂದಿಯನ್ನು ಊದಿ, ಹರುಹಿ ಮೆಚ್ಚು ಮಾಟಕ್ಕೆ ತೊಡಗಿದ್ದಾರೆ. ‘ಮಾಟ’ ಎಂಬ ಪದಕ್ಕೆ ‘ಮಂತ್ರ- ಮಾಟ’ವೆಂಬ ರೂಢಿಯ ಅರ್ಥವಲ್ಲದೆ, ಸೌಂದರ್ಯ, ಕಣ್ಣುಕಟ್ಟು, ಜಾದೂ ಎಂಬ ಅರ್ಥಗಳೂ ಇವೆ. ಮಾಟ ಪದದ ಅರ್ಥ ಸಾಧ್ಯತೆಗಳಲ್ಲಿ ಒಂದಾದ ‘ಅರಿವಾಗದ ಬದಲಾವಣೆಯ ಗುಣ’ದೊಡನೆ ಸೌಂದರ್ಯದ ಸ್ವೀಕಾರ ಗುಣವೂ ಸೇರಿ ‘ಮೆಚ್ಚು ಮಾಟ’ವೆಂಬ ಪ್ರಯೋಗವಾಗಿದೆ. ನೆಲದಲ್ಲಿ ನಿದ್ರಿಸಿರುವವರು ಎಚ್ಚೆತ್ತರೂ ಕೂಡ ಕನಿಷ್ಠ ಅವರಿಗೂ ನೋಡಲು ಬೆಳದಿಂಗಳು ಇದೆ.
ನೆರೆದವರು ಹರುಹಿದರು ಊದಿ
ಮಂತ್ರಿಸಿದ ಬೂದಿ
ಮೆಚ್ಚು ಮಾಟಕ್ಕ
ಮೆಚ್ಚು ಮಾಟಕ್ಕ
ನೆಲದವರು ನಿದ್ದಿಯ ಪಾಲು
ಮೂರು ಮುಕ್ಕಾಲು
ಮೂರು ಮುಕ್ಕಾಧಿಲು
ಅರಹುಚ್ಚು ಎಚ್ಚತ್ತರು ಕೂಡ
ಬೆಳುದಿಂಗಳ ನೋಡ
ಈ ಮಂತ್ರಿಸಿದ ಬೂದಿಯ ಪ್ರಭಾವ ಮಾತ್ರವಲ್ಲ ಚಂದಿರನ ನಗಿಯೇ ಮದುಮಗಳ ಕಣ್ಣಿನ ಬಗಿಯಾಗಿ ಒಂದು ದೊಡ್ಡ ರೂಪಾಂತರಕ್ಕೆ ಕಾರಣವಾಗಿದೆ. ಅದು ಮಾಯಕಾರರ ಬೀಡಾಗಿ ಪರಿವರ್ತನೆಗೊಂಡಿದೆ. ಇಲ್ಲಿ ಯಾವುದು ನಿಜ, ಯಾವುದು ಭ್ರಮೆ(ಮಾಯೆ) ಎಂಬುದರ ವಿಂಗಡನಾ ರೇಖೆ ಮಾಯೆಯ ಬೀಡಲ್ಲಿ ಸುಲಭವಲ್ಲ.
ಮದುಮಗಳ ಕಣ್ಣಿನ ಬಗೀ
ಚಂದಿರನ ನಗಿ
ಸುತ್ತ ಹರಿದದ
ಸುತ್ತ ಹರಿದದ
ಕಂಡವರ ಬಾಳು ಮರಿಸ್ಯದ
ತಣ್ಣಗಿರಿಸ್ಯದ
ಇದು ಮಾಯಕಾರರ ಬೀಡ
ಬೆಳುದಿಂಗಳ ನೋಡ
ಕಂಡವರಿಗೆ ತಮ್ಮ ಬಾಳು ಮರೆತು ಹೋಗುವಂತಹ ಈ ಶಕ್ತಿಯ ಮೂಲ ಚಂದಿರನ ನಗಿ. ಆದರೆ ಅದು ಉನ್ಮಾದ ಹುಟ್ಟಿಸುವ ನಗು. ಆ ನಗೆಯನ್ನು ಹೀರಿದರೆ ಉಂಟಾಗುವ ಮದವೇ ಒಂದು ನಶೆ. (ಆನೆಗಳಲ್ಲಿ ಕಾಮದ ಸೂಚನೆಯೇ ಮದವೇರುವುದು ಎಂಬುದನ್ನು ಈ ಸಂದರ್ಭದಲ್ಲಿ ‘ಮದ’ ಪದದ ಅರ್ಥವ್ಯಾಪ್ತಿಯಾಗಿ ನೆನಪಿಸಿಕೊಳ್ಳಬಹುದು.) ಚಂದ್ರಮನ ನಗಿ ಮದುಮಗಳ ಕಣ್ಣಿನ ಬಗಿಯನ್ನು ಹೀರಿ ಉಂಟಾಗುವ ಮದ. ಸಾಮಾನ್ಯವಾಗಿ ಟಿಂ ಹಕ್ಕಿಗಳ ಮೈ ಕಾಣುವುದಿಲ್ಲ. ಅದರ ಚೀರುವಿಕೆ ಕೇಳಿಸುತ್ತದೆ. ವಿಚಾರಕ್ಕೆ ಸಿಕ್ಕದೆ ಭಾವಾನುಭವಕ್ಕೆ ದಕ್ಕುವ ‘ಮದ’ಕ್ಕೆ ಕಾಡು ಮೇಡುಗಳೂ ಬೆರಗಿನಿಂದ ಬೆಪ್ಪಾಗಿವೆ.
ಸೂಸಿರುವ ನಗಿಯ ಬಗಿ ಹೀರಿ
ಮದಾ ತಲಿಗೇರಿ-
ಧಾಂಗ ಟಿಂ ಹಕ್ಕಿ
ಹಾಂಗ ಟಿಂ ಹಕ್ಕಿ
ಚೀರ್ತಧಿದ ಗಿಡಾ ಬಿಟ್ಟೋಡಿ
ಗಿಡಕ ಸುತ್ತಾಡಿ
ಬೆಪ್ಪಾಗೇದ ಕಾಡೂ ಮೇಡ
ಬೆಳುದಿಂಗಳ ನೋಡ
ಗಾಳಿ ಬೀಸಿ ಈಗ ತೂಕಡಿಸತೊಡಗಿದೆ. ವಾಚ್ಯಾರ್ಥದಿಂದ ಭಾವಾರ್ಥ ಪಡೆಯುವ ಸೊಗಸನ್ನು ಇಲ್ಲಿ ಗಮನಿಸಬೇಕು. ತೂಕಡಿಕೆಯಲ್ಲಿ ಸಣ್ಣ ಅಲ್ಲಾಟ ಇದೆ. ಗಾಳಿ ತೂಕಡಿಸಿದ ಹಾಂಗೆ ಅದರ ತುಪ್ಪಳದ ಗೂಡಲ್ಲಿ ತೊನೆಯುತ್ತಿದೆ. ಕಣ್ಣಿಗೆ ಕಾಣುವ ಬೆಳಕು ಇಲ್ಲಿ ಸ್ಪರ್ಶಕ್ಕೂ ಸಿಗುವ ತುಪ್ಪಳದ ಗೂಡಾಗಿ ಪರಿವರ್ತಿತವಾಗಿದೆ. (ಈ ಮೊದಲು ನಾಲಗೆಯ ಮೂಲಕ ಹೀರಲು ಸಿಕ್ಕಿದ ಚಂದ್ರಮನ ಬೆಳ್ಳಗಿನ ನಗೆಯನ್ನೂ ನೆನಪಿಸಿಕೊಳ್ಳಿ)
ಮರಮರದ ಗೂನಿಗೆ ಕೂತು
ಹಾರಿ ಮೈ ಸೋತು
ತೆಪ್ಪಗಧಿ ಗಾಳಿ
ತೆಪ್ಪಗಧಿ ಗಾಳಿ
ತೂಕಡಸತಧಿದ ತಾನೀಗ
ಜಂಪು ಬಂಧಾಂಗ
ಜಂಪು ಬಂಧಾಂಗ
ಇದು ಅದರ ತುಪ್ಪಳದ ಗೂಡ
ಬೆಳುದಿಂಗಳ ನೋಡ
ಮುಂದಿನದ್ದೆಲ್ಲಾ ಪಂಚೇಂದ್ರಿಯಗಳಲ್ಲಿ ಮೂಗನ್ನು ಆವರಿಸುವ ಹೂಗಳ ಕಂಪು ಬೆಳುದಿಂಗಳಿಗೆ ಸೇರಿದೆ. ಅದರ ತಂಪು ಸ್ಪರ್ಶೇಂದ್ರಿಯದ ಅನುಭವಕ್ಕೂ ಬರುತ್ತಿದೆ:
ಹೂತಧಿದ ಸುಗಂಧೀ ಜಾಲಿ
ಗಮ ಗಮಾ ಬೇಲಿ
ತುಳುಕತದ ಗಂಧ
ತುಳುಕತದ ಗಂಧ
ಶ್ಯಾವಂತಿ ಹೂವಿನ ಕಂಪು
ಇಡಿಗಿಸಿತು ತಂಪು
ಇದು ಸಾಕು ಬೆರೆ ಏನು ಬ್ಯಾಡ
ಬೆಳುದಿಂಗಳ ನೋಡ
ಇವಿಷ್ಟೂ ಸೇರಿ, ಬೆಳುದಿಂಗಳು ಸಾಮರಸ್ಯವನ್ನು ಸೃಷ್ಟಿಸಿದೆ. ಅಲ್ಲಿ ಗಾಳಿ, ಗಿಡ, ಮರ, ಹಕ್ಕಿ, ಬೆಳಕು ಯಾವುವೂ ಬೇರೆಯಲ್ಲ. ಬೆಳುದಿಂಗಳ ಬೆಳಕಿನ ಮಾಯೆ ಎಂದರೆ ಅದು. ಅಲ್ಲಿ ಕಣ್ಣಿಗೆ ಮಾತ್ರ ಕಾಣಬೇಕಾಗಿದ್ದ ಬೆಳಕು ಪಂಚೇಂದ್ರಿಯಗಳಿಗೂ ದಕ್ಕುವ ಮಾಟವಾಗಿದೆ. ಬೇಂದ್ರೆಯವರ ‘ಬೆಳಕು’ ಕವನ ಹಗಲಾಗುವ ಹೊತ್ತಿನ ಬೆಳಕು. ಅಲ್ಲಿ ಪಂಚೇಂದ್ರಿಯಗಳು ಪ್ರತ್ಯೇಕವಾಗಿ ಅನುಭವಿಸುವ ಕ್ರಮಗಳನ್ನು ವಿವರಿಸಲಾಗಿದೆ. ಇಲ್ಲಿ ಐಂದ್ರಿಯ ಅನುಭವಗಳು ಸೂಚಿತವಾಗಿವೆ. ಬೆಳುದಿಂಗಳಿಗೆ ಸಾಮರಸ್ಯದ ಶಕ್ತಿ ಇದೆ. ಹಕ್ಕಿ, ಮರಮರದ ಗೂನು, ಗಾಳಿ, ಕಂಪು ಎಲ್ಲವೂ ಒಂದಾಗಿವೆ.
ಆದುದರಿಂದಲೇ ಇದು ದಣಿಸಿದ ಹಗಲು ಹಿಂಗಿ ಕತ್ತಲೂ ಇಂಗಿ ಕನಸು ಬಿದ್ಧಾಂಗ ಇದೆ. ಇದೊಂದು ಮಾಯೆ. ಯಾಕೆಂದರೆ ಹಗಲು ಹಿಂಗಿದಾಗ ಕತ್ತಲು ಹುಟ್ಟಬೇಕಿತ್ತು. ಆದರೆ ಕತ್ತಲು ಇಲ್ಲಿ ಬೆಳದಿಂಗಳ ಒಳಗೆ ಇಂಗಿದೆ. ಕತ್ತಲು ಇಂಗಿದ ಅಂತಹ ಬೆಳಕೇ ಮನುಷ್ಯನ ನಿಜವಾದ ಕನಸು. ‘ಧಿಯೋಯೋನಃ ಪ್ರಚೋದಯಾತ್’ ಎಂಬುದು ಇಲ್ಲಿ ಹೊಸ ಭಾವಪೂರ್ಣತೆಯನ್ನು ಕಂಡಿದೆ.
Here you can download the ದ ರಾ ಬೇಂದ್ರೆ ಕವನಗಳು PDF / The Ra Bendre Poems PDF in Kannada language by click on the link given below.