ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ PDF

ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ PDF Download

ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ PDF download link is given at the bottom of this article. You can direct download PDF of ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ for free using the download button.

ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ PDF Summary

ಆತ್ಮೀಯ ಓದುಗರೇ, ಇಂದು ನಾವು ನಿಮ್ಮೆಲ್ಲರಿಗಾಗಿ ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ PDF ಅನ್ನು ಹಂಚಿಕೊಳ್ಳುತ್ತಿದ್ದೇವೆ. The given 2nd puc kannada shilube eriddane question answer PDF will be very useful for those students who are also serahing for it. If you are one of those then this article also will be proved very helpful for you.

Here we have prepared these Pdf notes for your knowledge. Through this you can easily know detailed information about ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ pdf. The 2nd Puc cross has been raised verse Pdf absolutely free to easy to download. Through this, you can easily score good marks in your upcoming examination.

You can easily understand Chapter 9 2nd puc kannada shilube eriddane summary, 2nd puc kannada shilube eriddane notes, 2nd puc kannada chapter 9 question answer, Shilube eriddane kannada poem notes pdf. The Karnataka State Board solutions are very valuable for you to revise and exam preparing.

ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ PDF – Highlights

PDF Name ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ PDF
No. of Pages 05
PDF Size 139KB
Language ದ್ವಿತೀಯ ಪಿ.ಯು.ಸಿ. ಕನ್ನಡ ಮಾಧ್ಯಮ
Category ಕನ್ನಡ
Download Link Available
Topic 2nd Puc ಶಿಲುಬೆ ಏರಿದ್ದಾನೆ ಪದ್ಯದ ಕನ್ನಡ ನೋಟ್ಸ್ Pdf

ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ PDF Download – ಕವಿ ಪರಿಚಯ:

ಕೆ.ಎಸ್ . ನಿಸಾರ್ ಅಹಮದ್ ( ಜನನ : ೫.೨.೧೯೩೬ ) ಅವರು ಪ್ರಯೋಗ ಶೀಲತೆ ಮತ್ತು ವಿಭಿನ್ನ ಸಂವೇದನೆಯ ಮೂಲಕ ಕನ್ನಡ ಕಾವ್ಯಕ್ಕೆ ಹೊಸ ಆಯಾಮ ನೀಡಿದವರು . ಹುಟ್ಟಿದ್ದು ದೇವನಹಳ್ಳಿಯಲ್ಲಿ . ಓದಿದ್ದು ಭೂಗರ್ಭ ವಿಜ್ಞಾನ . ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸದ್ಯ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ .

ವಿಭಿನ್ನ ಸಂಸ್ಕೃತಿಯ ಅರಿವು , ವೈಚಾರಿಕ ದೃಷ್ಟಿಕೋನ , ಲವಲವಿಕೆಯ ಭಾಷೆ , ಅನುಭವವನ್ನು ಹದವರಿತ ವ್ಯಂಗ್ಯ , ಕಟೋಕ್ತಿಗಳ ಮೂಲಕ ಹೇಳುವ ಜಾಣ್ಮ ನಿಸಾರರ ಕಾವ್ಯದ ಮುಖ್ಯ ಲಕ್ಷಣಗಳು . ಸಂಜೆ ಐದರ ಮಳೆ , ಅನಾಮಿಕ ಆಂಗ್ಲರು , ನೆನೆದವರ ಮನದಲ್ಲಿ , ಸುಮುಹೂರ್ತ , ನಾನೆಂಬ ಪರಕೀಯ , ಆಕಾಶಕ್ಕೆ ಸರಹದ್ದುಗಳಿಲ್ಲ , ಸ್ವಯಂಸೇವೆಯ ಗಿಳಿಗಳು , ಬಹಿರಂಗ ಮೊದಲಾದ ಕವನಸಂಕಲಗಳನ್ನು ನಿಸಾರ್‌ ಪ್ರಕಟಿಸಿದ್ದಾರೆ.

ಹಾಗೆಯೇ ಕನ್ನಡದ ಮೊಟ್ಟಮೊದಲ ಭಾವಗೀತೆಗಳ ಜನಪ್ರಿಯ ಕ್ಯಾಸೆಟ್ ನಿತ್ಯೋತ್ಸವ’ವನ್ನು ಹೊರತಂದು ಧ್ವನಿಸುರುಳಿ ಪರಂಪರೆ ಬೆಳೆಯಲು ನಿಸಾರ್ ಕಾರಣರಾಗಿದ್ದಾರೆ. ಕಾವ್ಯಕ್ಷೇತ್ರ ಮಾತ್ರವಲ್ಲದೆ ಶ್ರೇಷ್ಠ ಅನುವಾದಕರೂ , ವೈಚಾರಿಕ ಲೇಖನಕರ್ತರೂ ಆಗಿರುವ ನಿಸಾರ್ ೨೦೦೭ ರಲ್ಲಿ ಶಿವಮೊಗ್ಗದಲ್ಲಿ ನಡೆದ ೭೩ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ , ಹಂಪಿ ಕನ್ನಡ ವಿ.ವಿ.ಯ ನಾಡೋಜ ಪುರಸ್ಕಾರ , ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಅನಕೃ ಪ್ರಶಸ್ತಿ , ಇತ್ಯಾದಿ ಗೌರವಗಳು ಇವರಿಗೆ ಸಂದಿವೆ. ‘ಶಿಲುಬೆ ಏರಿದ್ದಾನೆ ‘ ಕವನ ಜೀಸಸ್ ಬಗ್ಗೆ ಗೋವಿಂದ ಪೈಯವರ ‘ ಗೊಲ್ಗೊಥಾ ‘ ಕವನದ ನಂತರ ಬಂದ ವಿಶಿಷ್ಟ ಕವನ.

ಜೀಸಸ್‌ನ ವ್ಯಕ್ತಿತ್ವ , ಆದರ್ಶಗಳನ್ನು ಅಪೂರ್ವವಾಗಿ ಚಿತ್ರಿಸಿರುವ ಕವಿ ಆ ಕಾಲದ ಹಿಂಸೆ , ಕ್ರೌರ್ಯ ಈ ಕಾಲದಲ್ಲಿಯೂ ಹೊಸರೂಪದಲ್ಲಿ ಮುಂದುವರೆಯುತ್ತಿರುವ ದುರಂತವನ್ನು ಕಟ್ಟಿಕೊಟ್ಟಿದ್ದಾರೆ. ಜೀಸಸ್‌ನ ಸಾವನ್ನು ವಿಷಾದದಿಂದ ನೋಡುವ ಕವಿ , ಆತ ಇಂದು ಅಸಂಖ್ಯ ಹೃದಯಗಳಲ್ಲಿ ಮಾನವತೆಯ ಕಿಡಿಯನ್ನು ಹಚ್ಚಿಹೋಗುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ .

ಕಾವ್ಯದ ಹಿನ್ನೆಲೆ :

ಜಗತ್ತಿಗೆ ಪ್ರೀತಿ , ದಯೆ , ಕರುಣೆಯ ಸಂದೇಶವನ್ನು ಸಾರಿದ ಮಹಾನ್ ವ್ಯಕ್ತಿಗಳಲ್ಲಿ ಜೀಸಸ್ ಪ್ರಮುಖರು . ಸಾವಿನ ಸಂಕಟದಲ್ಲೂ ವಿಚಲಿತನಾಗದೆ ಲೋಕಕಲ್ಯಾಣಕ್ಕಾಗಿ ಮಿಡಿದ ಜೀಸಸ್‌ನ ವ್ಯಕ್ತಿತ್ವ ಇಂದು ಪ್ರಸ್ತುತ ಹಿಂಸೆ ಆಧುನಿಕ ಸಮಾಜದ ಗುಣವೆಂಬಂತೆ ವಿಶ್ವವ್ಯಾಪಿಯಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಜೀಸಸ್‌ನ ಪ್ರೀತಿ , ಕರುಣೆ , ಔದಾರ್ಯ ನಮ್ಮೊಳಗೆ ಅನುರಣನಗೊಳ್ಳಬೇಕಾದ ಅಗತ್ಯವಿದೆ.

ಕವಿ ನಿಸಾರ್ ಅವರು ಜೀಸಸ್‌ನ ವ್ಯಕ್ತಿತ್ವದ ಬಗ್ಗೆ ಬರೆದಿರುವ ಈ ಕವಿತೆ ಪರಧರ್ಮ ಸಹಿಷ್ಣುತೆ ಹಾಗೂ ವಿಶ್ವಭಾತೃತ್ವಕ್ಕೆ ಬರೆದ ಹೊಸ ಭಾಷ್ಯದಂತಿದೆ.

ಶಬ್ದಾರ್ಥ :

ಶಿಲುಬೆ – ಕ್ರೈಸ್ತರಲ್ಲಿ ಹಿಂದೆ ತಪ್ಪಿತಸ್ಥರನ್ನು ಕೊಲ್ಲಲು ನಿರ್ಮಿಸಿದ ಮರದ ಸಾಧನ , ಕ್ರೈಸ್ತರ ಧಾರ್ಮಿಕ ಲಾಂಛನ ; ನಾತು – ಒಳ್ಳೆಯ ಮಾತು ; ಮಕುಟ – ಕಿರೀಟ ; ಕೊಂಬು – ವಾಲಗ ( ಊದುವ ಸಾಧನ ) : ಗುಜರಿ ಹಳೆಯ ಸಾಮಾನುಗಳನ್ನು ಮಾರುವ ಸ್ಥಳ : ರೈಫಲ್ಲು – ಪಿಸ್ತೂಲು ; ಟ್ಯಾಂಕು , ಗನೇಡು – ಯುದ್ಧ ಸಾಧನಗಳು ; ಮುಯ್ಯ – ಸೇಡು ; ಆಜ್ಯ – ತುಪ್ಪ ; ಮಸಜೀದು – ಮಸೀದಿ ; ಇಗರ್ಜಿ – ಚರ್ಚು ; ಮತಿರಹಿತ – ಬುದ್ಧಿರಹಿತ ; ಮಾಹೆ ತಿಂಗಳು ; ಒಂದಾವರ್ತಿ – ಒಂದು ಸಲ ; ಸೋಗೆ ಬಿಲ – ಗುಡಿಸಲು ; ಅಸಂಖ್ಯ – ಲೆಕ್ಕವಿಲ್ಲದಷ್ಟು ; ಕವಲು – ಟಿಸಿಲು , ಭಿನ್ನತೆ , ಬದಲಾವಣೆ.

Shilube Eriddane Kannada Poem Notes PDF

Ques. 1) ಕ್ರಿಸ್ಮಸ್ ಪ್ಲಾಸ್ಟಿಕ್ ನಕಲಿನ ಕುಬ್ದತೆಗೆ ಯಾವ ರೂಪ ಕರುಣಿಸಿದೆ ?

Ans. ಕ್ರಿಸ್ಮಸ್ , ಪ್ಲಾಸ್ಟಿಕ್ , ನಕಲಿನ ಕುಬ್ದತೆಗೆ ಗಿಡದ ರೂಪಕರುಣಿಸಿದೆ.

Ques. 2) ಜೀಸಸ್‌ನ ಶಿಲುಬೆಗೇರಿಸಿದವರು ಯಾರ ವಕಾಲತ್ತು ನಡೆಸಿದವರಾಗಿದ್ದಾರೆ ?

Ans. ಶಿಲುಬೆಗೇರಿಸಿದವರು ಕೊಲೆಗಡುಕ ಬರಬ್ಬನ ವಕಾಲತ್ತು ನಡೆಸಿದವರಾಗಿದ್ದಾರೆ.

ಸಂದರ್ಭವನ್ನು ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ

1. “ ಮನ್ನಿಸಲಿ ನಿಮ್ಮನ್ನ ಆ ದೇವರೆ ! ”

ಕೆ . ಎಸ್ . ನಿಸಾರ್ ಅಹಮದ್ ಅವರ ‘ ಶಿಲುಬೆ ಏರಿದ್ದಾನೆ ‘ ಎಂಬ ಕವಿತೆಯಲ್ಲಿ ಈ ಮೇಲಿನ ವಾಕ್ಯವನ್ನು ಕವಿಯೇ ಉದ್ಧರಿಸಿದ್ದಾರೆ . ಏಸುವು ನಿರಪರಾಧಿಯಾದವನು , ಕೊಲೆಗಡುಕ ಬರಬ್ಬನನ್ನು ಕ್ಷಮಿಸಿದ ರೋಮಿನ ಯಾಜಕರು ಏಸುವನ್ನು ಕ್ಷಮಿಸದೆ , ಕಳ್ಳರಿಬ್ಬರೊಂದಿಗೆ ಗಲ್ಲಿಗೇರಿಸಲು ಆಗ್ರಹಿಸಿದರು.

ಇದನ್ನು ನೆನೆದ ಕವಿಯು ನಿಮ್ಮ ದುಷ್ಟತನದ ಕೆಲಸವನ್ನು ಆ ದೇವರು ಕ್ಷಮಿಸಲಿ ” ಎಂದಿದ್ದಾರೆ . ಅಕ್ಷಮ್ಯ ಅಪರಾಧವನ್ನು ಕ್ಷಮಿಸಬೇಕೆಂಬ ಉದಾರ ಹೃದಯಿಯಾದ ಏಸುವಿನ ಬೆಳಕು – ಆದರ್ಶ ಕವಿಯಲ್ಲೂ ಅನುರಣಿಸಿರುವುದನ್ನು ಗಮನಿಸಬಹುದು.

2. “ ವೇಷ ಮರೆಸಿವೆ ಅಷ್ಟೆ – ಈ ಎಲ್ಲ ಕೇಡುಗಳು . ”

ಕೆ.ಎಸ್ . ನಿಸಾರ್ ಅಹಮದ್ ಅವರ ‘ ಶಿಲುಬೆ ಏರಿದ್ದಾನೆ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಏಸು ಶಿಲುಬೆ ಏರಿದ ಕಾಲದಲ್ಲಿ ಜಗತ್ತಿನಲ್ಲಿ ದುಷ್ಟತನ ಕ್ರೌರ್ಯಗಳು ಬಲವಾಗಿ ನೆಲೆಯೂರಿ ಮುಗ್ಧರನ್ನು ಅಮಾಯಕರನ್ನು ಶಿಕ್ಷಿಸಿ ಹಿಂಸಿಸುತ್ತಿದ್ದವು . ಈ ಗುಣಗಳು ಕಾಲರಾಯನ ಗುಜರಿ ಸೇರದೆ ಇಂದಿಗೂ ವೇಷ ಮರೆಸಿಕೊಂಡು ಜಗತ್ತನ್ನಾಳುತ್ತಿರುವು ದನ್ನು ಕವಿಯು ಈ ಮೇಲಿನ ವಾಕ್ಯದ ಮೂಲಕ ವಿವರಿಸಿದ್ದಾರೆ.

ವೇಷ ಮರೆಸಿರುವ ಕೇಡುಗಳು ರೈಫಲ್ಲು , ಟ್ಯಾಂಕ್ , ಬಾಂಬು , ಗ್ರೆನೇಡುಗಳ ರೂಪದಲ್ಲಿ ಹಿಂಸೆಯನ್ನು ಚಾಲ್ತಿಯಲ್ಲಿರಿಸಿರುವುದನ್ನು ಕವಿ ಇಲ್ಲಿ ಉದಾಹರಿಸಿದ್ದಾರೆ.

3. “ ದಿನನಿತ್ಯ ಶಿಲುಬೆಯೇರಿದ್ದಾನೆ ಜೀಸಸ್ . ”

ಕೆ . ಎಸ್ . ನಿಸಾರ್ ಅಹಮದ್ ಅವರ ‘ ಶಿಲುಬೆ ಏರಿದ್ದಾನೆ ‘ ಎಂಬ ಕವಿತೆಯ ಅಂತ್ಯದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು . ಏಸುಕ್ರಿಸ್ತನು ಇಂದಿಗೂ ದಿನನಿತ್ಯ ಶಿಲುಬೆ ಏರುವುದನ್ನು ಕವಿಯು ವಿವರಿಸಿದ್ದಾರೆ . ಆದರೆ ಆತ ಇಂದು ಶಿಲುಬೆಗೇರಿರುವುದು ಮತಗಳೆಂಬ ಮತಿಹೀನರ ದರ್ಪದಲ್ಲಿ ಶೋಷಣೆಗೊಳಗಾಗಿರುವ ಮುಗ್ಧರಲ್ಲಿ , ಅಮಾಯಕರಾಗಿ ಶಿಕ್ಷೆಗೆ ಗುರಿಯಾಗುತ್ತಿರುವ ದುಃಖಿತರ ಕಂಬನಿಗಳಲ್ಲಿ , ಆಸ್ಪತ್ರೆಗಳಲ್ಲಿ ನರಳುತ್ತಿರುವ ರೋಗಿಗಳ ರೂಪದಲ್ಲಿ , ತಿಂಗಳಿ ಗೊಮ್ಮೆಯೂ ದೀಪಹಚ್ಚಲು ಶಕ್ತಿಯಿಲ್ಲದ ಬಡವರ ಮನೆಗಳಲ್ಲಿ ಏಸುವು ದಿನ ನಿತ್ಯವೂ ಶಿಲುಬೆ ಏರಿ , ನೊಂದವರ ಕಂಬನಿಯನ್ನೊರೆಸುತ್ತಿದ್ದಾನೆಂದು ಕವಿಯು ಹೇಳಿದ್ದಾರೆ.

4. “ ಯಾತನೆಗೂ ನಲ್ವಾತನೇ ನುಡಿವ ಮುಖಮುದ್ರೆ ”

ಕೆ.ಎಸ್ . ನಿಸಾರ್ ಅಹಮದ್ ಅವರ ‘ ಶಿಲುಬೆ ಏರಿದ್ದಾನೆ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಗೋಡೆಯಲ್ಲಿರುವ ಏಸುವಿನ ಪಟವನ್ನು ನೋಡಿ ಕವಿಯು ಈ ಮೇಲಿನ ಮಾತನ್ನು ಹೇಳಿದ್ದಾರೆ . ಶಿಲುಬೆ ಏರಿರುವ ಜೀಸಸ್‌ನ ಪಟ ಗೋಡೆಯ ಮೇಲಿದೆ.

ಆತನ ಶಿರ ಬಾಗಿದೆ , ಕುತ್ತಿಗೆಯಲ್ಲಿ ನರ ಉಬ್ಬಿದೆ . ಇದು ದುಃಖ ಅನುಭವಿಸುತ್ತಿರುವುದರ ಸಂಕೇತವಾಗಿದೆ . ಜಡಿದ ಮೊಳೆ , ಬಡಿದ ಮುಳ್ಳಿನ ಕಿರೀಟಗಳ ನೋವನ್ನು ಸಹಿಸಿಯೂ ಏಸುವಿನ ಮುಖಮುದ್ರೆಯು ಒಳ್ಳೆಯ ಮಾತನ್ನೇ ನುಡಿಯುವಂತಿದೆ ಎಂದು ಕವಿಯು ವಿವರಿಸಿದ್ದಾರೆ . ತಾನು ನೋವುಂಡರೂ , ನೋವು ಮಾಡಿದವರಿಗೆ ಹಿತವನ್ನೇ ಬಯಸುವ ಕರುಣಾಮಯಿಯಾಗಿ ಏಸುವು ಕವಿಯ ಕಣ್ಣಿಗೆ ಕಂಡಿರುವನು.

5 , “ ಬಂದೇ ತೀರುತ್ತದೆ ದೈವೀರಾಜ್ಯ ”

ಕೆ . ಎಸ್ . ನಿಸಾರ್ ಅಹಮದ್ ಅವರ ‘ ಶಿಲುಬೆ ಏರಿದ್ದಾನೆ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಏಸುವು ಶಿಲುಬೆ ಏರಿದ್ದರೂ ಆತ ಮತ್ತೆ ಉದಯಿಸಿ ಬಂದು ದೈವೀರಾಜ್ಯವನ್ನು ತರುವನೆಂಬ ನಂಬಿಕೆ ಕವಿಯದಾಗಿದೆ.

ದುಷ್ಟರ ಸಾಮ್ರಾಜ್ಯಕ್ಕೆ , ಅವರ ಕ್ರೋಧ ಹಾಗೂ ತಿಳಿಗೇಡಿತನಕ್ಕೆ ಅಂತ್ಯವನ್ನು ಹಾಡಿ ದೈವೀಸಾಮ್ರಾಜ್ಯವನ್ನು ತರಲೆಂದೇ ಏಸುವು ಶಿಲುಬೆಯನ್ನು ಏರಿದ್ದಾನೆ . ಆತ ಮರಳಿ ಬಂದು ದುಷ್ಟತನವನ್ನು ತೊಲಗಿಸಿ ಸತ್ಯಕ್ಕೆ , ಒಳ್ಳೆಯತನಕ್ಕೆ ಅವಕಾಶಮಾಡಿಕೊಡುವನೆಂಬ ಆಶಯವನ್ನು ಕವಿಯು ಈ ಮೇಲಿನ ವಾಕ್ಯದ ಮೂಲಕ ವ್ಯಕ್ತಪಡಿಸಿದ್ದಾರೆ.

2nd Puc Kannada Shilube Eriddane Question Answer PDF

Ques. 1 ) ಶಿಲುಬೆಗೇರಿದ ಯೇಸುವಿನ ದೇಹ ಯಾರಿಗೆ , ಏನನ್ನು ಅನ್ನುವಂತಿದೆ ?

Ans. ಶಿಲುಬೆಗೇರಿದ ಯೇಸುವಿನ ದೇಹ “ ಕೊಲೆ ಗಡುಕ ಬರಬ್ಬನ ವಕಾಲತ್ತು ನಡೆಸಿದವರಿಗೆ ಹಾಗೂ ಎಡ – ಬಲಗಳಲ್ಲಿ ನಿಂತ ಕಳ್ಳರಿಗೆ , ರೋಮನ್ ಯುವಕರಿಗೆ “ ದೇವರು ನಿಮ್ಮನ್ನು ಮನ್ನಿಸಲಿ ” ಎಂದು ಹೇಳುವಂತಿದೆ.

Ques. 2 ) ಕ್ರಿಸ್ಮಸ್ ಮನೆಗೆ ಏನನ್ನು ಹೊತ್ತು ತಂದಿದೆ ?

Ans. ಕ್ರಿಸ್ಮಸ್ , ಮನೆಗೆ ಕೇಕು , ನಕ್ಷತ್ರದೀಪ , ಪ್ಲಾಸ್ಟಿಕ್ ನಕಲಿನ ಕುಬ್ದತೆಗೆ ಕರುಣಿಸಿದ ಗಿಡದ ರೂಪ , ಹತ್ತಿಯಿಂದ ಮಂಜಿನ ಸಾದೃಶ್ಯತೆ , ಸ್ಕರ್ಟ್ ಧರಿಸಿ ಮೊಂಬತ್ತಿ ಹಿಡಿದ ಹುಡುಗಿಯರು ಎಲ್ಲವೂ ಹೊತ್ತು ತಂದಿದೆ.

Ques. 3 ) ಯಾವ ಸಂದೇಶವನ್ನು ನೀಡುವ ರೀತಿಯಲ್ಲಿ ಜೀಸಸ್ ಶಿಲುಬೆಯೇರಿದ್ದಾನೆ ?

Ans. ಜಗತ್ತಿಗೆ ಪ್ರೀತಿ , ದಯೆ , ಕರುಣೆಯನ್ನು ತೋರುವ ದೈವಿ ಸಾಮ್ರಾಜ್ಯ ಬಂದೇ ಬರುತ್ತದೆ ಎಂಬ ಸಂದೇಶವನ್ನು ನೀಡುವ ರೀತಿಯಲ್ಲಿ ಜೀಸಸ್ ಶಿಲುಬೆ ಏರಿದ್ದಾನೆ.

Ques. 4 ) ಶಿಲುಬೆಗೇರಿಸಿದವರ ಗುಣಗಳು ಇಂದು ಯಾವ ವೇಷ ತಾಳಿವೆ ?

Ans. ಶಿಲುಬೆಗೇರಿಸಿದವರ ಗುಣಗಳು ಇಂದು ರೈಫಲ್ಲು , ಟ್ಯಾಂಕ್ , ಬಾಂಬು ಗ್ರನೇಡುಗಳ ವೇಷ ತಾಳಿವೆ.

You ca download ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ PDF by clicking on the following download button.

ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ pdf

ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ PDF Download Link

REPORT THISIf the download link of ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ PDF is not working or you feel any other problem with it, please Leave a Comment / Feedback. If ಶಿಲುಬೆ ಏರಿದ್ದಾನೆ ಪದ್ಯದ ಭಾವಾರ್ಥ is a copyright material Report This. We will not be providing its PDF or any source for downloading at any cost.

Leave a Reply

Your email address will not be published.